English
Open in Telegram
IIAS & KAS MINORITY FREE COACHING

IAS & KAS MINORITY FREE COACHING

@MINORITYIASKAS · group · Education · indexed since 2026-07-16
299members
1 802messages in the index
S
Photo
🎓 FREE KSOU Degree & PG Admission 2026–27 📚 ✅ Government Fee Payment Scheme for Minority Students The Government of Karnataka has continued the KSOU Admission Fee Payment Scheme for eligible Minority students. 📌 Eligible Communities: Muslim, Christian, Sikh, Jain, Buddhist & Parsi ✨ Benefits: ✔ Admission Fee Paid by Government ✔ Examination Fee Paid by Government ✔ UGC Recognized KSOU Programmes ✔ UG & PG Courses Available ✔ Flexible Distance Education 🗓 Last Date to Apply: 31 July 2026
S
Photo
🌿ರಾಜ್ಯ ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗದ (KPSC) ಹಂಗಾಮಿ ಅಧ್ಯಕ್ಷರನ್ನಾಗಿ ಡಾ. ಬಿ. ಪ್ರಭುದೇವ್ ಅವರನ್ನು ನೇಮಕ ಮಾಡಿದೆ. 👉ಪಾರದರ್ಶಕತೆ ಮತ್ತು ಯುಪಿಎಸ್‌ಸಿ ಮಾದರಿ ಆಡಳಿತದ ಭರವಸೆ ಆಯೋಗದಲ್ಲಿ ಆಮೆಗತಿಯಲ್ಲಿದ್ದ ಕೆಲಸ ಕಾರ್ಯಗಳಿಗೆ ಚುರುಕು ಮುಟ್ಟಿಸಿದ ಹೆಗ್ಗಳಿಕೆ ಡಾ. ಪ್ರಭುದೇವ್ ಅವರದ್ದಾಗಿದೆ. ಕೆಪಿಎಸ್‌ಸಿ ಸಂದರ್ಶನಗಳಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯನ್ನು ಅತ್ಯಂತ ಪ್ರಬುದ್ಧ ಹಾಗೂ ವಾಸ್ತವಿಕ ನೆಲೆಗಟ್ಟಿನಲ್ಲಿ ನಡೆಸುವ ಮೂಲಕ ಇವರು ಅಭ್ಯರ್ಥಿಗಳ ಗಮನ ಸೆಳೆದಿದ್ದರು
S
😊ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻 ⚫ ಅನುಮತಿ ನೀಡಲಾದ 600 ಹುದ್ದೆಗಳಲ್ಲಿ ಇದೀಗ 253 Civil PSI ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.!! ⚫ ವಿವಿಧ ಇಲಾಖೆಗಳಲ್ಲಿನ 3,000 FDA & 2,600 SDA ಹುದ್ದೆಗಳ ನೇಮಕಾತಿ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ.!! ⚫ 15,000 ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ.!! ⚫ ಅರಣ್ಯ ಇಲಾಖೆಯಲ್ಲಿ DyRFO ಸೇರಿದಂತೆ ವಿವಿಧ ಹುದ್ದೆಗಳಿಗೂ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ.!! ⚫ ಕಿರಿಯ ಪವರ್ ಮ್ಯಾನ್ HK 440 ಮತ್ತು NHK 560 ಹುದ್ದೆಗಳ ನೇಮಕಾತಿ ಹಾಗೂ ಕಿರಿಯ ಸ್ಟೇಷನ್ ಪರಿಚಾರಕ HK 24 & NHK 176 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.!! ⚫ ಅತೀ ಶೀಘ್ರದಲ್ಲೇ ಈ ಮೇಲಿನ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಯನ್ನು ನಿರೀಕ್ಷಿಸಬಹುದು.!!
S
ರಾಜ್ಯಸರ್ಕಾರದ ವಿವಿಧ ಇಲಾಖೆಗಳು, ನಿಗಮ-ಮಂಡಳಿಗಳು ಮತ್ತು ಅಧೀನ ಸಂಸ್ಥೆಗಳಲ್ಲಿನ Group-C ವೃಂದದ ಯಾವುದೇ-ಪದವಿ (Any-degree) ವಿದ್ಯಾರ್ಹತೆಯ ಆಧಾರದ Non-technical ಹುದ್ದೆಗಳೆಲ್ಲವನ್ನು ಸಂಯೋಜಿಸಿ, ಅಕ್ಟೋಬರ್-ತಿಂಗಳಿನಲ್ಲಿ 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ದಿಂದ ನೇರ-ನೇಮಕಾತಿ ಅಧಿಸೂಚನೆಯನ್ನು (Means Combined notification) ಹೊರಡಿಸಲಾಗುತ್ತದೆ ಹಾಗೂ ಈ ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಆದ್ಯತೆಗಳನ್ನು (Post preference) ಪಡೆಯಲಾಗುತ್ತದೆ. ಈ ನೇಮಕಾತಿಯ ಲಿಖಿತ-ಪರೀಕ್ಷೆಯನ್ನು ಜನವರಿ/ಫೆಬ್ರವರಿ ತಿಂಗಳಿನಲ್ಲಿ ನಡೆಸಲಾಗುತ್ತದೆ ಹಾಗೂ 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ವೇ ದಾಖಲೆ ಪರಿಶೀಲನೆಯನ್ನು ನಡೆಸಿ, ಅಭ್ಯರ್ಥಿಗಳು ವಿವಿಧ ಇಲಾಖೆಗಳ ಹುದ್ದೆಗಳಿಗೆ ನೀಡಿರುವ ಆದ್ಯತೆಯ ಅನುಸಾರ ಅಭ್ಯರ್ಥಿಗಳ ಅಂತಿಮ-ಆಯ್ಕೆಪಟ್ಟಿಯನ್ನು ಸಹಾ ಪ್ರಕಟಿಸಲಿದೆ.
S
File
5_6330172355624575989.pdf · 542 KB · click to show
KEA ಮುಂದಿನ ವಾರದೊಳಗೆ ಜಿಲ್ಲಾವಾರು ಅಂತಿಮ‌ ಅಂಕಪಟ್ಟಿಯನ್ನು ಪ್ರಕಟಿಸಲಿದೆ. ದೈಹಿಕ ಪರೀಕ್ಷೆಗೆ ಎಲ್ಲರೂ ಸಿದ್ದರಾಗಿ
S
Any degree ವಿದ್ಯಾರ್ಹತೆಯ ಮತ್ತು PUC(ತತ್ಸಮಾನ) ವಿದ್ಯಾರ್ಹತೆಯ ಆಧಾರದ Group-C ವೃಂದದ ಹುದ್ದೆಗಳಿಗೆ ಹಾಗೂ FDA & SDA ಹುದ್ದೆಗಳಿಗೆ ಅಕ್ಟೋಬರ್-ತಿಂಗಳಿನಲ್ಲಿ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಲಿಖಿತ-ಪರೀಕ್ಷೆ :- ಜನವರಿ/ಫೆಬ್ರವರಿ. ಒಟ್ಟು ಹುದ್ದೆಗಳ ಸಂಖ್ಯೆ :- 6,000 ರಿಂದ 7,000. (ಪ್ರಶ್ನೆಗಳ ಕಠಿಣತೆ ಮತ್ತು ಸ್ಪರ್ಧೆಯ ಆಧಾರದಲ್ಲಿ ಹೇಳುವುದಾದರೆ, ಉಳಿದಿರುವ ಸಮಯಾವಕಾಶವು ಅತ್ಯಮೂಲ್ಯವಾದದ್ದು. ಹಾಗಾಗಿ, ಯಾವುದೇ ಕಪೋಕಲ್ಪಿತ ಸುದ್ದಿಗಳಿಗೆ ಬೆಲೆ ಕೊಡದೆ ಪರೀಕ್ಷಾ ತಯಾರಿಯಲ್ಲಿ ತಲ್ಲೀನರಾಗಿ).
S
'Excise Sub-Inspector' ಮತ್ತು 'Excise Constable' ಹುದ್ದೆಗಳ ನೇರ-ನೇಮಕಾತಿ ಅಧಿಸೂಚನೆಯು ಸಹಾ ಆದಷ್ಟು ಶೀಘ್ರದಲ್ಲಿ ಹೊರಬೀಳಲಿದೆ.
S
Photo
KEA Director Prasanna sir, Concurrent Charge as KPSC Controller of Examinations ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ 'H. ಪ್ರಸನ್ನ ' ಅವರಿಗೆ ಕರ್ನಾಟಕ ಲೋಕಸೇವಾ ಆಯೋಗದ 'ಪರೀಕ್ಷಾ ನಿಯಂತ್ರಕ'ರಾಗಿ ಹುದ್ದೆಯ ಪ್ರಭಾರಿ ವಹಿಸಲಾಗಿದೆ.
2 · 4.7K ·
S
Photo
ನೋಡಿ ಸೆಪ್ಟೆಂಬರ್/2026 ರ ಅಂತ್ಯದವರಗೆ 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ಕ್ಕೆ ವಿವಿಧ ಇಲಾಖೆಗಳಿಂದ ತಲುಪುವ Group-C ವೃಂದದ Non-technical & Clerical ಹುದ್ದೆಗಳೆಲ್ಲವನ್ನು ಒಗ್ಗೂಡಿಸಿ ಅಕ್ಟೋಬರ್/2026 ರಲ್ಲಿ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಹಾಗೂ ಈ ಹುದ್ದೆಗಳಿಗೆ ಜನವರಿ/2027 ರಲ್ಲಿ ಲಿಖಿತ-ಪರೀಕ್ಷೆಯನ್ನು ನಡೆಸಲಾಗುತ್ತದೆ. ಅದೇ ರೀತಿಯಲ್ಲಿ, ಅಕ್ಟೋಬರ್/2026 ರಿಂದ ಮೇ/2027 ರ ಅಂತ್ಯದವರಗೆ 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ಕ್ಕೆ ವಿವಿಧ ಇಲಾಖೆಗಳಿಂದ ತಲುಪುವ Group-C ವೃಂದದ Non-technical & Clerical ಹುದ್ದೆಗಳೆಲ್ಲವನ್ನು ಒಗ್ಗೂಡಿಸಿ ಜೂನ್/2027 ರಲ್ಲಿ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಹಾಗೂ ಈ ಹುದ್ದೆಗಳಿಗೆ ಅಕ್ಟೋಬರ್/2027 ರಲ್ಲಿ ಲಿಖಿತ-ಪರೀಕ್ಷೆಯನ್ನು ನಡೆಸಲಾಗುತ್ತದೆ.
S
ಅಬಕಾರಿ ಇಲಾಖೆಯ ESI ಮತ್ತು ಪೊಲೀಸ್ ಇಲಾಖೆಯ PSI ಹುದ್ದೆಗಳಿಗೆ ನೇರ-ನೇಮಕಾತಿ ಅಧಿಸೂಚನೆ ಹೊರಡಿಸಲು ಬಹಳಷ್ಟು ಸಿದ್ಧತೆಗಳು ನಡೆಯುತ್ತಿವೆ. ESI ಹುದ್ದೆಗಳಿಗೆ ಮೊದಲು ನೇರ-ನೇಮಕಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿದ್ದು, ಅನಂತರ ಎರಡು ತಿಂಗಳ ಬಳಿಕ PSI ಹುದ್ದೆಗಳಿಗೆ ನೇರ-ನೇಮಕಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ. PSI ಹುದ್ದೆಗಳಿಗಿಂತ ESI ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಮುಂಚಿತವಾಗಿ ಪೂರ್ಣಗೊಂಡು, ಮೊದಲು ESI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ joining letter ಕೊಟ್ಟು, ಅನಂತರ PSI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ joining letter ದೊರೆತರೆ, ಬಹಳಷ್ಟು ESI ಹುದ್ದೆಗಳು ಖಾಲಿ ಉಳಿಯಲಿವೆ. ಬಹಳಷ್ಟು ಅಭ್ಯರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ. ಹಾಗಾಗಿ, ESI ಮತ್ತು PSI ಎರಡೂ ಹುದ್ದೆಗಳಿಗೆ ಒಂದೇ ತಿಂಗಳಿನಲ್ಲಿ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ಪರೀಕ್ಷಾ ಪ್ರಕ್ರಿಯೆಗಳು & ಇತರೆ ಆಯ್ಕೆ ಪ್ರಕ್ರಿಯೆಗಳು ಒಂದೇ ಕಾಲಮಾನದಲ್ಲಿ ಪೂರ್ಣಗೊಳ್ಳಬೇಕು. PSI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ನೇಮಕಾತಿ ಆದೇಶಪತ್ರವನ್ನು ನೀಡಬೇಕು. ಅನಂತರ, ESI ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ನೇಮಕಾತಿ ಆದೇಶಪತ್ರವನ್ನು ನೀಡಬೇಕು.
S
Photo
📢 KPSC ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ 📢 ಕರ್ನಾಟಕ ಲೋಕಸೇವಾ ಆಯೋಗ (KPSC) ಪರೀಕ್ಷಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ◈ ಪರೀಕ್ಷೆ ಮುಗಿದ ಕೂಡಲೇ ಆಯಾ ಜಿಲ್ಲೆಗಳಲ್ಲಿ ಲಭ್ಯವಿರುವ ಸ್ಕ್ಯಾನಿಂಗ್ ಯಂತ್ರಗಳ ಮೂಲಕ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಅಧಿಕೃತ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ. ◈ ಅಭ್ಯರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲು ಅವಕಾಶ ಕಲ್ಪಿಸುವ ಉದ್ದೇಶ. ◈ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಮುಖ್ಯ ಉದ್ದೇಶ ◈ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಕ್ರಮ 📌 ಪರೀಕ್ಷಾರ್ಥಿಗಳಿಗೆ ಇದರ ಪ್ರಯೋಜನ: ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಲಭ್ಯವಾದರೆ, ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಲು ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಸಾಧಿಸಲು ಸಾಧ್ಯವಾಗಲಿದೆ.
S
'ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಮಂಡಳಿ'ಯು ಅಕ್ಟೋಬರ್/ನವೆಂಬರ್ ತಿಂಗಳಿನಲ್ಲಿ 253 PSI(Civil) ಹುದ್ದೆಗಳಿಗೆ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ. ಅನಂತರ, ದೇಹದಾರ್ಡ್ಯತೆ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳಲ್ಲಿ (PST & PET) ಅರ್ಹತೆ ಪಡೆದ ಅಭ್ಯರ್ಥಿಗಳ ಆಯ್ಕೆಪಟ್ಟಿಯು 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ಕ್ಕೆ ತಲುಪಲಿದ್ದು, ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ KEA ಲಿಖಿತ-ಪರೀಕ್ಷೆಯನ್ನು ನಡೆಸಿ 'ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಮಂಡಳಿ'ಗೆ ಅಂಕಪಟ್ಟಿಯನ್ನು ಕಳುಹಿಸಲಿದೆ.
S
Photo
𝐂𝐓𝐄𝐓 𝟐𝟎𝟐𝟔 𝐁𝐫𝐞𝐚𝐤𝐢𝐧𝐠 𝐂𝐓𝐄𝐓 𝐄𝐱𝐚𝐦 𝐩𝐨𝐬𝐭𝐩𝐨𝐧𝐞𝐝 𝐀𝐠𝐚𝐢𝐧 𝐭𝐡𝐞𝐲 𝐠𝐢𝐯𝐞𝐧 𝐜𝐡𝐚𝐧𝐜𝐞 𝐭𝐨 𝐚𝐩𝐩𝐥𝐲 𝐟𝐨𝐫 𝐂𝐓𝐄𝐓 𝟐𝟎𝟐𝟔.. 𝐃𝐚𝐭𝐞𝐬 𝐨𝐩𝐞𝐦 𝐟𝐫𝐨𝐦 𝐭𝐨𝐝𝐚𝐲 𝟐𝟓-𝟎𝟖-𝟐𝟎𝟐𝟔 𝐭𝐨 𝟎𝟏-𝟎𝟗-𝟐𝟎𝟐𝟔 ಯಾರು ಮೊದಲು apply ಮಾಡಿಲ್ಲ ಮತ್ತೇ ಅರ್ಜಿ ಸಲ್ಲಿಸಬಹುದು ನೋಡಿ.
S
Photo
PSI ಅಭ್ಯರ್ಥಿಗಳೇ ನಿಮಗೆ ಸಿಹಿ ಸುದ್ದಿ 750 ಸಿವಿಲ್ ಪಿಎಸ್ಐ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಲಾಗಿದೆ ✅ ಯಾವುದೇ ಕ್ಷಣದಲ್ಲಿ ನೇಮಕಾತಿ ಆಗಬಹುದು ನಿಮ್ಮ ಸ್ಟಡಿ ನಿರಂತರವಾಗಿರಲಿ ಕೃಪೆ : ಜ್ಞಾನವೆ ಬೆಳಕು.🤝
S
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಇಲಾಖೆಗಳ Group-C ವೃಂದದ 4,483 ತಾಂತ್ರಿಕೇತರ ಹುದ್ದೆಗಳಿಗೆ ಮತ್ತು 216 ತಾಂತ್ರಿಕ ಹುದ್ದೆಗಳಿಗೆ ಈ ವಾರವೇ ನೇರ-ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಲಿಖಿತ-ಪರೀಕ್ಷೆಯನ್ನು ನಡೆಸುವ ಸಂಭವವಿದೆ. (ಈ ನೇಮಕಾತಿಯ ಪರೀಕ್ಷಾ ದಿನಾಂಕಗಳನ್ನು ನಿಗದಿ ಪಡಿಸುವ ನಿರ್ಧಾರವು 15,000 ಶಿಕ್ಷಕರ ಹುದ್ದೆಗಳ ಪರೀಕ್ಷಾ ದಿನಾಂಕಗಳ ಮುಂದೂಡುವಿಕೆಯ ನಿರ್ಧಾರದ ಮೇಲೆ ಅವಲಂವಿತವಾಗಿದೆ).
S
ಆತ್ಮೀಯ ಅಭ್ಯರ್ಥಿಗಳೆ, ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ವಸತಿಯುತ ಗ್ರೂಪ್ ಸಿ. ತರಬೇತಿಯು ದಿನಾಂಕ: 30.08.2026 ರಿಂದ ಪ್ರಾರಂಭವಾಗುತ್ತಿದ್ದು. ಆಯ್ಕೆಯಾದ ಅಭ್ಯರ್ಥಿಗಳು ದಿನಾಂಕ :30-08-2026 ರಿಂದ 05-10-2026 ರ ಬೆಳಗ್ಗೆ 9:00 ಗಂಟೆ ಇಂದ ಸಾಯಂಕಾಲ 4:00 ಗಂಟೆಗಳವರೆಗೆ ಪ್ರವೇಶವನ್ನು ಪಡೆಯಲು STG TRAINING ACADEMY near STG PU COLLEGE Bhukanakere road , chinakurali Pandavapura taluk Mandya district ಈ ಸ್ಥಳದಲ್ಲಿ ಹಾಜರಾಗಿರಬೇಕೆಂದು ತಿಳಿಸಲಾಗಿದೆ. ಹಾಜರಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ದಿನಾಂಕ 30/08/2026 ತರಗತಿಗಳು ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳು ಸಲ್ಲಿಸಬೇಕಾದ ದಾಖಲೆಗಳು: 1. ಎಸ್.ಎಸ್.ಎಲ್.ಸಿ ಅಂಕ ಪಟ್ಟಿ: 02 ಪ್ರತಿಗಳು 2. ದ್ವಿತೀಯ ಪಿ.ಯು.ಸಿ. ಅಂಕ ಪಟ್ಟಿ: 02 ಪ್ರತಿಗಳು 3. ಪದವಿ ಅಂಕ ಪಟ್ಟಿ : 02 ಪ್ರತಿಗಳು 4. ಆಧಾರ್ ಕಾರ್ಡ್: 02 ಪ್ರತಿಗಳು 5. ಜಾತಿ ಮತ್ತು ಆದಾಯ ಪ್ರಮಾಣಪತ್ರ: 02 ಪ್ರತಿಗಳು 6. ಫಾಸ್‌ಪೋರ್ಟ್ ಅಳತೆಯ ಭಾವಚಿತ್ರ: 03 ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ: 9187192415 8553339040, 91480 47205 ಇಂದ, ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು.
Whole thread · 1 reply →

An open public feed from the search index ChatCrawler — “Google for public Telegram”; refreshed as the venue is crawled. Times are UTC.

Public content only, official Telegram API. About · FAQ · Index limits · Remove a page · Catalog · Search · How we count