English
Open in Telegram
SStudy Monk KAS 🎯🧘

Study Monk KAS 🎯🧘

@Studymonk36 · group · Education · indexed since 2026-09-30
69 708members
1writing in 30 days
267messages in 30 days
18 104messages in the index
S
Study Monk KAS 🎯🧘
Photo
ಕಚ್ಚತೀವು ದ್ವೀಪ ವಿವಾದ.....!!!!!!! 🗞️ ಸುದ್ದಿಯಲ್ಲಿರುವ ಸ್ಥಳಗಳು 👉ಪಾಕ್ ಜಲಸಂಧಿಯಲ್ಲಿ ಜನವಸತಿಯಿಲ್ಲದ ಸಮುದ್ರ ತೀರದ ದ್ವೀಪವಾಗಿದೆ 👉ಇದು ತಮಿಳುನಾಡಿನ ರಾಮೇಶ್ವರಂ ಪಟ್ಟಣದ ಈಶಾನ್ಯಕ್ಕೆ ಮತ್ತು ಶ್ರೀಲಂಕಾದ ಜಾಫ್ನಾ ನಗರದ ನೈಋತ್ಯಕ್ಕೆ ಇದೆ. 👉ಈ ದ್ವೀಪವನ್ನು ಮೀನುಗಾರರು ತಮ್ಮ ಬಲೆಗಳನ್ನು ಒಣಗಿಸಲು ಬಳಸುತ್ತಾರೆ 👉ಬ್ರಿಟಿಷರ ಆಳ್ವಿಕೆಯಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಡಳಿತ ನಡೆಸುತ್ತಿತ್ತು 👉20 ನೇ ಶತಮಾನದ ಆರಂಭದಲ್ಲಿ , ಶ್ರೀಲಂಕಾ ದ್ವೀಪದ ಮೇಲೆ ಪ್ರಾದೇಶಿಕ ಮಾಲೀಕತ್ವವನ್ನು ಹೊಂದಿತ್ತು, ಆದ್ದರಿಂದ 1974 ರಲ್ಲಿ ಭಾರತವು ಜಂಟಿ ಒಪ್ಪಂದದ ಮೂಲಕ ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತು . 👉ಎರಡು ವರ್ಷಗಳ ನಂತರ ಮತ್ತೊಂದು ಒಪ್ಪಂದದ ಮೂಲಕ, ಭಾರತವು ಈ ಪ್ರದೇಶದಲ್ಲಿ ತನ್ನ ಮೀನುಗಾರಿಕೆ ಹಕ್ಕುಗಳನ್ನು ಸಹ ಬಿಟ್ಟುಕೊಟ್ಟಿತು 👉ಭಾರತದಲ್ಲಿ, ಕಚ್ಚತೀವು ಬಿತ್ತುಕೊಟ್ಟಿದನ್ನು  ಕಾನೂನುಬಾಹಿರವೆಂದು ಹೇಳಲಾಗುತ್ತದೆ, ಏಕೆಂದರೆ ಇದನ್ನು ಭಾರತೀಯ ಸಂಸತ್ತು ಅಂಗೀಕರಿಸಲಿಲ್ಲ. 👉ಭಾರತದ ಸರ್ವೋಚ್ಚ ನ್ಯಾಯಾಲಯವು ಬೇರೂಬರಿ ಯೂನಿಯನ್ ಪ್ರಕರಣದಲ್ಲಿ (1960) ಭಾರತೀಯ ಭೂಪ್ರದೇಶವನ್ನು ಮತ್ತೊಂದು ದೇಶಕ್ಕೆ ಬಿಟ್ಟುಕೊಡುವುದನ್ನು ಸಂಸತ್ತು ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಮೂಲಕ ಅಂಗೀಕರಿಸಬೇಕು ಎಂದು ತೀರ್ಪು ನೀಡಿತ್ತು
❤67🔥1
  1. S
    Study Monk KAS 🎯🧘
    ನಿಮಗಿದು ತಿಳಿದಿರಲಿ!!!!! 🤝 1974ರಲ್ಲಿ ಎರಡೂ ದೇಶಗಳು ಅಂತರಾಷ್ಟ್ರೀಯ ಸಮುದ್ರ ಗಡಿ ಒಪ್ಪಂದ (International Maritime Boundary Agreement)ಕ್ಕೆ ಸಹಿ ಹಾಕಿದವು. ಆ ಒಪ್ಪಂದದ ಪ್ರಕಾರ🤔👇 👉ಕಚ್ಚತೀವು ದ್ವೀಪ → ಶ್ರೀಲಂಕಾಗೆ ನೀಡಲಾಯಿತು. 👉ವಾಡ್ಜ್ ಬ್ಯಾಂಕ್ (Wadge Bank) → ಕನ್ಯಾಕುಮಾರಿಯ ಬಳಿ ಇರುವ ಈ ಪ್ರಮುಖ ಮೀನುಗಾರಿಕೆ ಪ್ರದೇಶವನ್ನು ಭಾರತ ಪಡೆದಿತು. 🕵️ ಸುದ್ದಿಯ ಮೂಲ:- https://www.thehindu.com/news/international/dissanayake-highlights-good-relations-with-india-points-to-new-delhis-katchatheevu-stance/article71572026.ece
    ❤40👍3
Whole thread · 1 reply →
S
Study Monk KAS 🎯🧘
ಮರಕ್ಕೆ ಎಸೆದ ಎಲ್ಲಾ ಕಲ್ಲುಗಳೂ ಹಣ್ಣು ಉದುರಿಸುವುದಿಲ್ಲ. ಎಲ್ಲವೂ ಒಂದೇ ಸಲಕ್ಕೆ ದಕ್ಕುವಂತಿದ್ದರೆ 'ಪ್ರಯತ್ನ' ಎಂಬ ಶಬ್ದವೇ ಇರುತ್ತಿರಲಿಲ್ಲ.....!!!!! Good Night Officer's 😴❤️🙏
❤231👍46🙏22❤‍🔥14🔥14👏11👌7🫡2🥰2
S
Study Monk KAS 🎯🧘
Photo
World Food Prize 2026.....!!!!!! 🗞️ ಪ್ರಶಸ್ತಿ ಮತ್ತು ಗೌರವಗಳು 🎖️ನೆದರ್‌ಲ್ಯಾಂಡ್ಸ್‌ನ ಖ್ಯಾತ ಆಹಾರ ವಿಜ್ಞಾನಿ ಹ್ಯೂಬ್ ಲೆಲಿವೆಲ್ಡ್ (Huub Lelieveld) ಅವರು 2026ರ ಪ್ರತಿಷ್ಠಿತ ವಿಶ್ವ ಆಹಾರ ಪ್ರಶಸ್ತಿ (World Food Prize 2026) ಗೆ ಭಾಜನರಾಗಿದ್ದಾರೆ. 🎖️ಕೃಷಿ ಮತ್ತು ಆಹಾರ ಕ್ಷೇತ್ರದ ‘ನೊಬೆಲ್ ಪ್ರಶಸ್ತಿ’ ಎಂದೇ ಪರಿಗಣಿಸಲಾಗುವ ಈ ಗೌರವಕ್ಕೆ ಸಂಬಂಧಿಸಿದ ಸಮಗ್ರ ವಿವರಗಳು ಇಲ್ಲಿವೆ. 🎖️ವಿಜೇತರು: ಹ್ಯೂಬ್ ಲೆಲಿವೆಲ್ಡ್ (Huub Lelieveld). 🎖️ದೇಶ: ನೆದರ್‌ಲ್ಯಾಂಡ್ಸ್ (Netherlands). 🎖️ಬಹುಮಾನ ಮೊತ್ತ: 5,00,000 ಅಮೆರಿಕನ್ ಡಾಲರ್ 🎖️ಧ್ಯೇಯ ಮತ್ತು ಪ್ರೇರಣೆ: "ಎಲ್ಲರಿಗೂ ಸುರಕ್ಷಿತ ಆಹಾರ" (Safe food for everybody) ಎಂಬ ಧ್ಯೇಯದೊಂದಿಗೆ ಕಳೆದ ಆರು ದಶಕಗಳಿಂದ ಆಹಾರ ವಿಜ್ಞಾನ, ಸಂಸ್ಕರಣೆ ಮತ್ತು ನೈರ್ಮಲ್ಯ ಮಾನದಂಡಗಳ ಸುಧಾರಣೆಗಾಗಿ ಶ್ರಮಿಸಿದ್ದಾರೆ 🎖️ವಿವಿಧ ದೇಶಗಳ ನಡುವಿನ ಆಹಾರ ಸುರಕ್ಷತಾ ನಿಯಮಾವಳಿಗಳನ್ನು ಏಕರೂಪಗೊಳಿಸಲು, ಆಹಾರ ವ್ಯಾಪಾರವನ್ನು ಸರಳಗೊಳಿಸಲು ಹಾಗೂ ನಿರ್ಗತಿಕ ಜನರಿಗೆ ಸುರಕ್ಷಿತ ಆಹಾರ ತಲುಪುವಲ್ಲಿ ಉಂಟಾಗುವ ಅನಗತ್ಯ ಅಡೆತಡೆಗಳನ್ನು ನಿವಾರಿಸಲು 2004 ರಲ್ಲಿ 'ಗ್ಲೋಬಲ್ ಹಾರ್ಮೋನೈಸೇಶನ್ ಇನಿಶಿಯೇಟಿವ್' (GHI) ಸ್ಥಾಪಿಸಿದರು.
❤65🔥1🙏1
  1. S
    Study Monk KAS 🎯🧘
    ವಿಶ್ವ ಆಹಾರ ಪ್ರಶಸ್ತಿ ಬಗ್ಗೆ....!!!!! ✍️1987 ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ನಾರ್ಮನ್ ಬೋರ್ಲಾಗ್ ವಿಶ್ವ ಆಹಾರ ಪ್ರಶಸ್ತಿಯನ್ನು ಸ್ಥಾಪಿಸಿದರು ✍️ಇದನ್ನು ಜಾಗತಿಕ ಆಹಾರ ಭದ್ರತೆಗೆ ಗಣನೀಯವಾಗಿ ಕೊಡುಗೆ ನೀಡುವ ವ್ಯಕ್ತಿಗಳಿಗೆ ನೀಡಿ ಗೌರವಿಸಲಾಗುತ್ತದೆ. ✍️5,00,000 US ಡಾಲರ್ ಮೊತ್ತದ ಬಹುಮಾನವನ್ನು ಒಳಗೊಂಡಿದೆ. ✍️ಪ್ರಶಸ್ತಿ ನೀಡುವವರು:- World Food Prize Foundation ✍️1987 ರಿಂದ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ✍️ಭಾರತದ ಡಾ. ಎಂ. ಎಸ್. ಸ್ವಾಮಿನಾಥನ್ ಅವರು 1987 ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದರು ✍️ಇದನ್ನು ಕೆಲವೊಮ್ಮೆ "ಆಹಾರ ಮತ್ತು ಕೃಷಿಯ ನೊಬೆಲ್ ಪ್ರಶಸ್ತಿ" ಎಂದೂ ಕರೆಯಲಾಗುತ್ತದೆ. ನಿಮಗಿದು ತಿಳಿದಿರಲಿ....!!!! 📍ಬ್ರೆಜಿಲ್‌ನ ಖ್ಯಾತ ಸೂಕ್ಷ್ಮ ಜೀವಶಾಸ್ತ್ರಜ್ಞೆ ಡಾ. ಮಾರಿಯಾಂಜೆಲಾ ಹಂಗ್ರಿಯಾ ಅವರು 2025 ರ ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದಿದ್ದರು:- https://t.me/Studymonk36/11256
    ❤30
Whole thread · 1 reply →
S
Study Monk KAS 🎯🧘
Photo
💡 ಜಾಗತಿಕ ನಾವೀನ್ಯತೆ ಸೂಚ್ಯಂಕ (Global Innovation Index - GII): ಭಾರತದ ಐತಿಹಾಸಿಕ ಪ್ರಗತಿ....!!!! 🗞️ ವರದಿ ಮತ್ತು ಸೂಚ್ಯಂಕಗಳು ✅ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಬಿಡುಗಡೆ ಮಾಡಿರುವ ಜಾಗತಿಕ ನಾವೀನ್ಯತೆ ಸೂಚ್ಯಂಕ (GII) ವರದಿಯಲ್ಲಿ ಭಾರತವು 38ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಅಭೂತಪೂರ್ವ ಪ್ರಗತಿ ಸಾಧಿಸಿದೆ. 📌 ವರದಿ ಮತ್ತು ಸಂಸ್ಥೆಯ ಹಿನ್ನೆಲೆ (About GII & WIPO): ✅ ವರದಿ ಬಿಡುಗಡೆ ಮಾಡುವ ಸಂಸ್ಥೆ: ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO - World Intellectual Property Organization). ✅ WIPO ಕೇಂದ್ರ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್ (Geneva, Switzerland). ✅ GII ಉದ್ದೇಶ: ಪ್ರಪಂಚದ ದೇಶಗಳ ಆರ್ಥಿಕತೆ, ನಾವೀನ್ಯತೆ (Innovation), ಸಂಶೋಧನೆ & ಅಭಿವೃದ್ಧಿ (R&D), ಸ್ಟಾರ್ಟಪ್ ಪರಿಸರ ವ್ಯವಸ್ಥೆ ಮತ್ತು ತಂತ್ರಜ್ಞಾನ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುವುದು. 📈 ಭಾರತದ ಪ್ರಗತಿಯ ಹಾದಿ (India's Journey): 👉 2015: 81ನೇ ಸ್ಥಾನ 👉 2019: 66ನೇ ಸ್ಥಾನ 👉 ಪ್ರಸ್ತುತ: 38ನೇ ಸ್ಥಾನ
❤57👏13🔥3👌2
  1. S
    Study Monk KAS 🎯🧘
    ✅ ದಶಕದ ಸಾಧನೆ: ಕೇವಲ ಒಂದು ದಶಕದಲ್ಲಿ (10 ವರ್ಷಗಳಲ್ಲಿ) ಭಾರತವು ಬರೋಬ್ಬರಿ 43 ಸ್ಥಾನಗಳ ಅಗಾಧ ಸುಧಾರಣೆ ಕಂಡಿದೆ. ✅ ಪ್ರಾದೇಶಿಕ ಮುಂಚೂಣಿ: ಮಧ್ಯ ಮತ್ತು ದಕ್ಷಿಣ ಏಷ್ಯಾ (Central & Southern Asia) ವಲಯದಲ್ಲಿ ಭಾರತವು ನಿರಂತರವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ ಹಾಗೂ ಕೆಳ-ಮಧ್ಯಮ ಆದಾಯದ ಆರ್ಥಿಕತೆಗಳ (Lower-Middle Income Economies) ಪೈಕಿ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ. 🏆 2026ರ ಜಾಗತಿಕ ಅಗ್ರ 05 ದೇಶಗಳು 🇨🇭 ಸ್ವಿಟ್ಜರ್‌ಲ್ಯಾಂಡ್ 🇸🇪 ಸ್ವೀಡನ್ 🇺🇸 ಅಮೆರಿಕ 🇰🇷 ದಕ್ಷಿಣ ಕೊರಿಯಾ 🇸🇬 ಸಿಂಗಾಪುರ 🧩 GII ಅಳೆಯುವ ಪ್ರಮುಖ 7 ಸ್ತಂಭಗಳು: 👉 ಸಂಸ್ಥೆಗಳು (Institutions): ರಾಜಕೀಯ, ನಿಯಂತ್ರಕ ಮತ್ತು ವ್ಯಾಪಾರ ವಾತಾವರಣ. 👉 ಮಾನವ ಬಂಡವಾಳ ಮತ್ತು ಸಂಶೋಧನೆ (Human Capital & Research): ಶಿಕ್ಷಣ ಮತ್ತು R&D ಹೂಡಿಕೆ. 👉 ಮೂಲಸೌಕರ್ಯ (Infrastructure): ಮಾಹಿತಿ ತಂತ್ರಜ್ಞಾನ (ICT), ಪರಿಸರ ಸುಸ್ಥಿರತೆ. 👉 ಮಾರುಕಟ್ಟೆ ಅತ್ಯಾಧುನಿಕತೆ (Market Sophistication): ಸಾಲ ಸೌಲಭ್ಯ, ಹೂಡಿಕೆ ಮತ್ತು ವ್ಯಾಪಾರ. 👉 ವ್ಯಾಪಾರ ಅತ್ಯಾಧುನಿಕತೆ (Business Sophistication): ಜ್ಞಾನ ಕಾರ್ಯಕರ್ತರು, ನಾವೀನ್ಯತಾ ಸಂಪರ್ಕಗಳು. 👉 ಜ್ಞಾನ ಮತ್ತು ತಂತ್ರಜ್ಞಾನ ಉತ್ಪನ್ನಗಳು (Knowledge & Technology Outputs): ಪೇಟೆಂಟ್‌ಗಳು, ವೈಜ್ಞಾನಿಕ ಪ್ರಕಟಣೆಗಳು. 👉 ಸೃಜನಶೀಲ ಉತ್ಪನ್ನಗಳು (Creative Outputs): ಡಿಜಿಟಲ್ ವಿಷಯ, ಟ್ರೇಡ್‌ಮಾರ್ಕ್‌ಗಳು, ಕೈಗಾರಿಕಾ ವಿನ್ಯಾಸಗಳು. 🕵️ ಸುದ್ದಿಯ ಮೂಲ:- https://indianexpress.com/article/upsc-current-affairs/upsc-essentials/knowledge-nugget-global-innovation-index-2026-india-key-highlights-upsc-10916341/
    ❤39
Whole thread · 1 reply →
S
Study Monk KAS 🎯🧘
Photo
ಲೋಕನಾಯಕ ಜಯಪ್ರಕಾಶ ನಾರಾಯಣ...!!!! 🗞️ ಇತಿಹಾಸ ಕಲೆ ಮತ್ತು ಸಂಸ್ಕೃತಿ ✅ ಭಾರತದ ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಚಿಂತಕ ಹಾಗೂ ಪ್ರಜಾಪ್ರಭುತ್ವದ ರಕ್ಷಕ ಲೋಕನಾಯಕ ಜಯಪ್ರಕಾಶ ನಾರಾಯಣ (ಜೆ.ಪಿ) ಅವರ ಜನ್ಮದಿನದ (ಅಕ್ಟೋಬರ್ 11) ಅಂಗವಾಗಿ ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ✅ ಲೋಕನಾಯಕ: ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ಸದಾ ಧ್ವನಿ ಎತ್ತಿದ್ದಲ್ಲದೆ, ಯಾವುದೇ ರಾಜಕೀಯ ಅಧಿಕಾರದ ಆಸೆಗೆ ಬೀಳದೆ ನಿಸ್ವಾರ್ಥವಾಗಿ ಜನಪರ ಹೋರಾಟ ನಡೆಸಿದ್ದರಿಂದ ಜನ ಅವರನ್ನು ಪ್ರೀತಿಯಿಂದ ‘ಲೋಕನಾಯಕ’ (ಜನರ ನಾಯಕ) ಎಂದು ಕರೆದರು. ✅ ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿ (CSP): 1934ರಲ್ಲಿ ಆಚಾರ್ಯ ನರೇಂದ್ರ ದೇವ್, ರಾಮಮನೋಹರ ಲೋಹಿಯಾ ಅವರೊಂದಿಗೆ ಸೇರಿ ಕಾಂಗ್ರೆಸ್ ಒಳಗೆ ಸಮಾಜವಾದಿ ಸಿದ್ಧಾಂತವನ್ನು ಬೆಳೆಸಲು ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿ ಸ್ಥಾಪಿಸಿದರು. ✅ ಕಾನೂನು ಭಂಗ ಮತ್ತು ಕ್ವಿಟ್ ಇಂಡಿಯಾ ಚಳವಳಿ: ನಾಗರಿಕ ಅಸಹಕಾರ ಚಳವಳಿ (1930–34) ಹಾಗೂ ಕ್ವಿಟ್ ಇಂಡಿಯಾ ಚಳವಳಿಯ (1942–43) ಸಮಯದಲ್ಲಿ ಜೈಲು ಸೇರಿದರು. ✅ ಸರ್ವೋದಯ ಮತ್ತು ಭೂದಾನ ಚಳವಳಿ:- ಸ್ವಾತಂತ್ರ್ಯಾನಂತರ ಅಧಿಕಾರ ರಾಜಕಾರಣದಿಂದ ದೂರ ಸರಿದ ಜೆ.ಪಿ, ಆಚಾರ್ಯ ವಿನೋಬಾ ಭಾವೆ ಅವರ ‘ಭೂದಾನ ಚಳವಳಿ’ ಹಾಗೂ ಗಾಂಧೀಜಿಯವರ ‘ಸರ್ವೋದಯ’ ತತ್ವಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಬಡ ಮತ್ತು ಭೂರಹಿತ ರೈತರಿಗೆ ಭೂಮಿ ಹಂಚಿಕೆ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
❤46👌8👍3
  1. S
    Study Monk KAS 🎯🧘
    ✅ ಸಂಪೂರ್ಣ ಕ್ರಾಂತಿ (Total Revolution):- ಸಮಾಜದಲ್ಲಿ ಕೇವಲ ರಾಜಕೀಯ ಬದಲಾವಣೆಯಷ್ಟೇ ಸಾಲದು; ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ನೈತಿಕ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ಸಮಗ್ರ ಬದಲಾವಣೆ ಬರಬೇಕು ಎಂದು 'ಸಂಪೂರ್ಣ ಕ್ರಾಂತಿ'ಗೆ ಕರೆ ನೀಡಿದರು. ✅ ತುರ್ತು ಪರಿಸ್ಥಿತಿ ವಿರೋಧ (1975–77): 1975ರಲ್ಲಿ ಹೇರಲಾದ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದ ಇವರನ್ನು ಸರ್ಕಾರ ಜೈಲಿನಲ್ಲಿಟ್ಟಿತು. ಜೈಲಿನಿಂದ ಹೊರಬಂದ ನಂತರ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಜನತಾ ಪಕ್ಷ ಸ್ಥಾಪನೆಗೆ ಕಾರಣರಾದರು; 1977ರಲ್ಲಿ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಲು ಜೆ.ಪಿ ಮುಖ್ಯ ರೂವಾರಿಯಾದರು. ಸಾಹಿತ್ಯ ಮತ್ತು ಪ್ರಮುಖ ಗೌರವಗಳು ✅ ಪುಸ್ತಕ: 1959ರಲ್ಲಿ ಪ್ರಜಾಪ್ರಭುತ್ವದ ವಿಕೇಂದ್ರೀಕರಣ ಮತ್ತು ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಪ್ರತಿಪಾದಿಸಿ "A Plea for Reconstruction of Indian Polity" ಎಂಬ ಗ್ರಂಥವನ್ನು ರಚಿಸಿದರು. ✅ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ (1965): ಸಾರ್ವಜನಿಕ ಸೇವೆಗಾಗಿ ಈ ಗೌರವ ಸಂದಿತು. ✅ ಭಾರತ ರತ್ನ (1998): ಇವರ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡಿ ಗೌರವಿಸಲಾಯಿತು. 🕵️ ಸುದ್ದಿಯ ಮೂಲ:- https://www.pib.gov.in/PressReleaseDetail.aspx?PRID=2321856&reg=22&lang=1 ಇದು Current Affairs ಅಲ್ಲ.....History Subject News ಓದಿ ಅಷ್ಟೇ ನೋಟ್ಸ್ ಬೇಡ....!!!!
    ❤51👏2
Whole thread · 1 reply →
S
Study Monk KAS 🎯🧘
Photo
INS Mangrol.....!!!!!!! 🗞️ Defence & Security ✅ ಭಾರತೀಯ ನೌಕಾಪಡೆಯು ಕರಾವಳಿ ಮತ್ತು ಆಳವಿಲ್ಲದ ಸಮುದ್ರ ನೀರಿನಲ್ಲಿ (Coastal and Shallow Waters) ಜಲಾಂತರ್ಗಾಮಿ ನಿಗ್ರಹ ಸಾಮರ್ಥ್ಯವನ್ನು ಬಲಪಡಿಸಲು ಮುಂಬೈನ ನೇವಲ್ ಡಾಕ್‌ಯಾರ್ಡ್‌ನಲ್ಲಿ INS ಮಾಂಗ್ರೋಲ್ (INS Mangrol) ಯುದ್ಧನೌಕೆಯನ್ನು ಅಧಿಕೃತವಾಗಿ ಸೇವೆಗೆ ನಿಯೋಜಿಸಿದೆ (Commissioned). ಪ್ರಮುಖ ಮುಖ್ಯಾಂಶಗಳು ✅ ವರ್ಗ ಮತ್ತು ಸ್ವರೂಪ: ಇದು 'ಮಾಹೆ ದರ್ಜೆ'ಯ (Mahe-class) ಆಂಟಿ-ಸಬ್‌ಮರೀನ್ ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್ (ASW-SWC). ✅ ಸ್ಥಾನ: ಈ ದರ್ಜೆಯ ಒಟ್ಟು 8 ನೌಕೆಗಳಲ್ಲಿ INS ಮಾಂಗ್ರೋಲ್ ಮೂರನೆಯ ನೌಕೆಯಾಗಿದೆ. ✅ ನಿರ್ಮಾಣ: ಇದನ್ನು ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ನಿರ್ಮಿಸಿದೆ. ✅ ಸ್ವದೇಶೀಕರಣ: ಈ ನೌಕೆಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಸ್ವದೇಶಿ ಸಾಮಗ್ರಿಗಳನ್ನು ಬಳಸಲಾಗಿದ್ದು, 'ಆತ್ಮನಿರ್ಭರ ಭಾರತ' ಉಪಕ್ರಮಕ್ಕೆ ಬಲ ನೀಡಿದೆ. ✅ ಹೆಸರಿನ ಹಿನ್ನೆಲೆ: ಗುಜರಾತ್‌ನ ಕರಾವಳಿ ಪಟ್ಟಣವಾದ 'ಮಾಂಗ್ರೋಲ್' ಹೆಸರನ್ನು ಇದಕ್ಕೆ ಇಡಲಾಗಿದೆ. ಹಿಂದೆ ಇದೇ ಹೆಸರಿನ ಮೈನ್‌ಸ್ವೀಪರ್ (ಗಣಿ ನಿವಾರಕ ನೌಕೆ) 2004 ರಲ್ಲಿ ಸೇವೆಯಿಂದ ನಿವೃತ್ತಿಗೊಂಡಿತ್ತು. 🕵️ ಸುದ್ದಿಯ ಮೂಲ:- https://newsonair.gov.in/indian-navy-commissions-third-anti-submarine-warfare-craft-ins-mangrol-in-mumbai/
❤67👍5👏1
S
Study Monk KAS 🎯🧘
Good Evening Officer's ❤️🙏
❤35🙏18👌3
S
Study Monk KAS 🎯🧘
Photo
Kolar is set to become Karnataka's first net-zero emission district.....!!!!!! 🗞️ ಕರ್ನಾಟಕ ರಾಜ್ಯ ಸುದ್ದಿಗಳು ⛅⛈️ ಕರ್ನಾಟಕದ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆಯಾಗಿ, ಕೋಲಾರ ಜಿಲ್ಲೆಯನ್ನು ಕರ್ನಾಟಕದ ಪ್ರಪ್ರಥಮ 'ನೆಟ್-ಝೀರೋ' (ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ) ಜಿಲ್ಲೆಯನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮಹತ್ವದ ಯೋಜನೆಯನ್ನು ರೂಪಿಸಿದೆ. ಪ್ರಮುಖ ಮುಖ್ಯಾಂಶಗಳು ⛅⛈️🌳 ಮೊದಲ ನೆಟ್-ಝೀರೋ ಜಿಲ್ಲೆ: ಕೈಗಾರಿಕೆ, ಕೃಷಿ ಮತ್ತು ನಗರ ತ್ಯಾಜ್ಯಗಳಿಂದ ಪರಿಸರಕ್ಕೆ ಬಿಡುಗಡೆಯಾಗುವ ಹಸಿರುಮನೆ ಅನಿಲಗಳ ಪ್ರಮಾಣವನ್ನು ಗರಿಷ್ಠ ಮಟ್ಟದಲ್ಲಿ ಕಡಿಮೆ ಮಾಡಿ, ಉಳಿದ ಹೊರಸೂಸುವಿಕೆಯನ್ನು ಅರಣ್ಯೀಕರಣ ಮತ್ತು ನವೀಕರಿಸಬಹುದಾದ ಇಂಧನದ ಮೂಲಕ ಸಮತೋಲನಗೊಳಿಸಿ (Net-Zero Emissions) ಶೂನ್ಯ ಮಟ್ಟಕ್ಕೆ ತರಲು ಕೋಲಾರವನ್ನು ಆಯ್ಕೆ ಮಾಡಲಾಗಿದೆ. ⛅⛈️🌳 ಪ್ರಾಯೋಗಿಕ ತಾಣ (Testing Ground): ರಾಜ್ಯಾದ್ಯಂತ ಈ ಮಾದರಿಯನ್ನು ವಿಸ್ತರಿಸುವ ಮುನ್ನ, ಸಮಗ್ರ ಕಾರ್ಯಯೋಜನೆಯನ್ನು ಪರೀಕ್ಷಿಸಲು ಕೋಲಾರವನ್ನು ಆರಂಭಿಕ ಪ್ರಯೋಗಾಲಯವಾಗಿ (Pilot Ground) ಕಾರ್ಯಪಡೆ ಗುರುತಿಸಿದೆ. 🕵️ ಸುದ್ದಿಯ ಮೂಲ:- https://timesofindia.indiatimes.com/city/bengaluru/karnatakas-kolar-may-be-states-first-net-zero-emission-district/articleshow/134898960.cms
❤41👍4
  1. S
    Study Monk KAS 🎯🧘
    ನಿಮಗಿದು ಗೊತ್ತಲ್ಲವೇ....!!!!! ರಾಜ್ಯ ನೆಟ್-ಝೀರೋ ಕಾರ್ಯಪಡೆ (State Task Force on Net-Zero) ✅ ಸ್ಥಾಪನೆ: ಕಡಿಮೆ ಇಂಗಾಲದ ಮತ್ತು ಹವಾಮಾನ-ಸ್ಥಿತಿಸ್ಥಾಪಕತ್ವ ಹೊಂದಿದ (Climate-resilient) ಸುಸ್ಥಿರ ಆರ್ಥಿಕತೆಯನ್ನು ನಿರ್ಮಿಸಲು ಕರ್ನಾಟಕ ಸರ್ಕಾರವು ಜುಲೈ 2026 ರಲ್ಲಿ ಈ ವಿಶೇಷ ಕಾರ್ಯಪಡೆಯನ್ನು ರಚಿಸಿತು. ✅ ನಾಯಕತ್ವ: ಅಂತರರಾಷ್ಟ್ರೀಯ ಸೌರ ಮೈತ್ರಿಕೂಟದ (International Solar Alliance) ಸಂಸ್ಥಾಪಕ ಮಹಾನಿರ್ದೇಶಕರಾಗಿದ್ದ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಅವರು ಈ ಕಾರ್ಯಪಡೆಯ ಸಹ-ನೇತೃತ್ವವನ್ನು (Co-lead) ವಹಿಸಿದ್ದಾರೆ. 🕵️ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಅವರನ್ನು ಕರ್ನಾಟಕದ ಮೊದಲ 'ಹವಾಮಾನ ರಾಯಭಾರಿ' (Climate Ambassador) ಹಾಗೂ ಮುಖ್ಯಮಂತ್ರಿಗಳ ಗೌರವ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ:- https://t.me/Studymonk36/19213
    ❤27
Whole thread · 1 reply →
S
Study Monk KAS 🎯🧘
ಕೋಲಾರ ಈ ಹಿಂದೆ ಸುದ್ದಿಯಲ್ಲಿತ್ತು !!!!!!! 📍ಮಾಲಿನ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ Multi Sector Net Zero Sustainability Industrial Park ಅನ್ನು PPP ಮಾದರಿಯಲ್ಲಿ ಸ್ಥಾಪಿಸಲು ಚಿಂತನೆ: https://t.me/Studymonk36/12276 📍ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋಲಾರದ ಬೃಹತ್ ಕೆರೆ ಸೋಮಸುಂದ್ರ ಅಗ್ರಹಾರದಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ: https://t.me/Studymonk36/11814 📍ಗೃಹ ಅರೋಗ್ಯ ಯೋಜನೆಯ ಪ್ರಾಯೋಗಿಕ ಜಾರಿ ಇಲ್ಲೇ ಮೊದಲು:- https://t.me/Studymonk36/11812 📍India’s first private sector helicopter final assembly line inaugurated near Kolar in Karnataka:- https://t.me/Studymonk36/17241 📍2026-27ರ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ವತಿಯಿಂದ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಪ್ರಾಯೋಗಿಕವಾಗಿ 'ರೈತ ಮಾಲ್‌'ಗಳನ್ನು ಸ್ಥಾಪಿಸಲು ಘೋಷಿಸಲಾಗಿದೆ:- https://t.me/Studymonk36/17611 ಮತ್ತೇ Study Monk ಓದುಗರಲ್ಲಿ ನೀವು ಕೋಲಾರ ದವರಾಗಿದ್ದರೆ ಇಲ್ಲೊಂದು 👉❤️ ನೀಡೋದು ಮರೀಬೇಡಿ..!!!!!
❤98🙏17👍13
S
Study Monk KAS 🎯🧘
Photo
Exercise INDRA-2026....!!!!! 🗞️ Defence & Security ⛴️ ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಸ್ಟೆಲ್ತ್ ಫ್ರಿಗೇಟ್ INS ಸಹ್ಯಾದ್ರಿ , ರಷ್ಯಾದ ನೌಕಾಪಡೆಯೊಂದಿಗೆ ಜಂಟಿಯಾಗಿ ನಡೆಯುವ ಪ್ರಮುಖ ದ್ವಿಪಕ್ಷೀಯ ಕಡಲ ಸಮರಾಭ್ಯಾಸವಾದ 'ಇಂದ್ರ-2026' ನಲ್ಲಿ ಭಾಗವಹಿಸಲು ರಷ್ಯಾದ ವ್ಲಾಡಿವೋಸ್ಟಾಕ್ ಬಂದರನ್ನು ತಲುಪಿದೆ. ಪ್ರಮುಖ ಮುಖ್ಯಾಂಶಗಳು ⛴️ ಸಮರಾಭ್ಯಾಸದ ಸ್ವರೂಪ: ಭಾರತೀಯ ನೌಕಾಪಡೆ ಮತ್ತು ರಷ್ಯನ್ ಒಕ್ಕೂಟದ ನೌಕಾಪಡೆಗಳ (RuFN) ನಡುವಿನ ಪ್ರಮುಖ ವಾರ್ಷಿಕ ದ್ವಿಪಕ್ಷೀಯ ಕಡಲ ಸಮರಾಭ್ಯಾಸ. ⛴️ ದಿನಾಂಕ: ಅಕ್ಟೋಬರ್ 13 ರಿಂದ 18, 2026. ⛴️ ಸ್ಥಳ ಮತ್ತು ಆತಿಥ್ಯ: ರಷ್ಯಾ ಆತಿಥ್ಯ ವಹಿಸಿದ್ದು, ಬಂದರು ಹಂತವು (Harbour Phase) ವ್ಲಾಡಿವೋಸ್ಟಾಕ್ ಬಂದರಿನಲ್ಲಿ ಹಾಗೂ ಸಮುದ್ರ ಹಂತವು (Sea Phase) ಜಪಾನ್ ಸಮುದ್ರದ (Sea of Japan) ಜಲಪ್ರದೇಶದಲ್ಲಿ ನಡೆಯುತ್ತಿದೆ. ⛴️ ಭಾರತದ ಪ್ರಾತಿನಿಧ್ಯ: ಭಾರತೀಯ ನೌಕಾಪಡೆಯ ಪ್ರಾಜೆಕ್ಟ್-17 ದರ್ಜೆಯ ಗೈಡೆಡ್-ಮಿಸೈಲ್ ಸ್ಟೆಲ್ತ್ ಫ್ರಿಗೇಟ್ ಆದ INS ಸಹ್ಯಾದ್ರಿ ಇದರಲ್ಲಿ ಪಾಲ್ಗೊಂಡಿದೆ. 🕵️ ಸುದ್ದಿಯ ಮೂಲ:- https://newsonair.gov.in/ins-sahyadri-arrives-in-russia-for-india-russia-naval-exercise-indra-2026/
❤39🥰2
S
Study Monk KAS 🎯🧘
Photo
Government Renames NSAP Scheme....!!!! 🗞️ ಕೇಂದ್ರ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳು ✅ ಹೊಸ ಹೆಸರು: ಕೇಂದ್ರ ಸಚಿವ ಸಂಪುಟವು 'ನ್ಯಾಷನಲ್ ಸೋಶಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಂ' (NSAP) ಹೆಸರನ್ನು ‘ಪ್ರಧಾನ ಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ’ ಎಂದು ಮರುನಾಮಕರಣ ಮಾಡಿದೆ. ✅ ಅವಧಿ ಮತ್ತು ಆರ್ಥಿಕ ಹಂಚಿಕೆ: ಈ ಯೋಜನೆಯನ್ನು 2026-27 ರಿಂದ 2030-31 ರವರೆಗೆ (ಮುಂದಿನ 5 ವರ್ಷಗಳ ಕಾಲ) ವಿಸ್ತರಿಸಲಾಗಿದ್ದು, ಇದಕ್ಕಾಗಿ ಒಟ್ಟು ₹53,428 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ✅ ಹಿನ್ನೆಲೆ: ಈ ಯೋಜನೆಯನ್ನು ಮೂಲತಃ 1995 ರ ಆಗಸ್ಟ್ 15 ರಂದು ಆರಂಭಿಸಲಾಯಿತು. ಭಾರತದ ಸಂವಿಧಾನದಲ್ಲಿರುವ ನಿರ್ದೇಶಕ ತತ್ವಗಳ (Directive Principles of State Policy - Article 41) ಆಶಯದಂತೆ ಇದು ಜಾರಿಗೆ ಬಂದ ಪ್ರಮುಖ ಕಲ್ಯಾಣ ಕಾರ್ಯಕ್ರಮವಾಗಿದೆ. ✅ ನಿರ್ವಹಣಾ ಸಚಿವಾಲಯ: ಈ ಯೋಜನೆಯನ್ನು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು (Ministry of Rural Development) ನಿರ್ವಹಿಸುತ್ತದೆ.
❤38
S
Study Monk KAS 🎯🧘
Photo
ಕೇಂದ್ರ ಸರ್ಕಾರವು ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಅವುಗಳ ಉಪ-ಯೋಜನೆಗಳ ಹೆಸರುಗಳನ್ನು ಬದಲಾಯಿಸಿರುವುದನ್ನು (Renaming) ಪಟ್ಟಿ ಮಾಡಲಾಗಿದೆ......!!!!! ವೃದ್ಧಾಪ್ಯ ಪಿಂಚಣಿ (ಹಿರಿಯ ನಾಗರಿಕರಿಗೆ) ✅ ಹಳೆಯ ಹೆಸರು: ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS) ✅ ಹೊಸ ಹೆಸರು: ಪ್ರಧಾನ ಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ ವಿಧವಾ ಪಿಂಚಣಿ (ವಿಧವೆಯರಿಗೆ) ✅ ಹಳೆಯ ಹೆಸರು: ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ (IGNWPS) ✅ ಹೊಸ ಹೆಸರು: ಪ್ರಧಾನ ಮಂತ್ರಿ ವಿಧವಾ ಪಿಂಚಣಿ ಯೋಜನೆ ವಿಕಲಚೇತನರ ಪಿಂಚಣಿ (ಅಂಗವಿಕಲರಿಗೆ) ✅ ಹಳೆಯ ಹೆಸರು: ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆ (IGNDPS) ✍️ ಹೊಸ ಹೆಸರು: ಪ್ರಧಾನ ಮಂತ್ರಿ ದಿವ್ಯಾಂಗಜನ ಪಿಂಚಣಿ ಯೋಜನೆ ಕುಟುಂಬ ನೆರವು ಯೋಜನೆ ✅ ಹಳೆಯ ಹೆಸರು: ರಾಷ್ಟ್ರೀಯ ಕುಟುಂಬ ಸೌಲಭ್ಯ ಯೋಜನೆ (National Family Benefit scheme) ✍️ ಹೊಸ ಹೆಸರು: ಪ್ರಧಾನ ಮಂತ್ರಿ ಪರಿವಾರ ಲಾಭ ಯೋಜನೆ 🕵️ ಸುದ್ದಿಯ ಮೂಲ:- https://www.pib.gov.in/PressReleasepage.aspx?PRID=2323264&reg=48&lang=1
❤26🔥12🙏3
S
Study Monk KAS 🎯🧘
Photo
ಅಂತರರಾಷ್ಟ್ರೀಯ ನೈಸರ್ಗಿಕ ವಿಕೋಪ ಅಪಾಯ ಕಡಿತ ದಿನ (International Day for Disaster Risk Reduction) ....!!!!! 🗞️ Date & Themes ✅ ದಿನಾಂಕ: ಪ್ರತಿ ವರ್ಷ ಅಕ್ಟೋಬರ್ 13 ರಂದು ಜಾಗತಿಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ✅ ಆರಂಭ: ಈ ದಿನಾಚರಣೆಯನ್ನು ವಿಶ್ವಸಂಸ್ಥೆಯು (United Nations) 1989 ರಲ್ಲಿ ಆರಂಭಿಸಿತು. ✅ 2026 ರ ಧ್ಯೇಯವಾಕ್ಯ (Theme): "Resilience Starts at Home" (ಸ್ಥಿತಿಸ್ಥಾಪಕತ್ವವು ಮನೆಯಿಂದಲೇ ಆರಂಭವಾಗುತ್ತದೆ). ✅ ಸೆಂಡೈ ಚೌಕಟ್ಟು (Sendai Framework):- 2015–2030 ರವರೆಗಿನ 'ಸೆಂಡೈ ವಿಪತ್ತು ಅಪಾಯ ಕಡಿತ ಚೌಕಟ್ಟು' ಜಾಗತಿಕ ಗುರಿಗಳನ್ನು ನಿಗದಿಪಡಿಸಿದ್ದು, ಈ ದಿನದ ಆಚರಣೆಯು ಆ ಗುರಿಗಳನ್ನು ತಲುಪಲು ಪೂರಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. 🕵️ ಸುದ್ದಿಯ ಮೂಲ:- https://www.un.org/en/observances/disaster-reduction-day
❤29🔥1
S
Study Monk KAS 🎯🧘
Photo
ಅಂತರರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ (International Day of Rural Women) – 2026 🗞️ Date & Themes ✅ ದಿನಾಂಕ: ಪ್ರತಿ ವರ್ಷ ಅಕ್ಟೋಬರ್ 15 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ✅ 2026 ರ ಘೋಷವಾಕ್ಯ (Theme): “Rural Women Farmers Caring for Mother Nature” (ತಾಯಿ ಪ್ರಕೃತಿಯನ್ನು ಪೋಷಿಸುವ ಗ್ರಾಮೀಣ ಮಹಿಳಾ ರೈತರು). ✅ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (UNGA) 2007 ರ ಡಿಸೆಂಬರ್ 18 ರಂದು ತನ್ನ ನಿರ್ಣಯದ ಮೂಲಕ ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ✅ ಮೊದಲ ಬಾರಿಗೆ ಈ ದಿನವನ್ನು ಅಕ್ಟೋಬರ್ 15, 2008 ರಂದು ಆಚರಿಸಲಾಯಿತು. 🕵️ ಸುದ್ದಿಯ ಮೂಲ:- https://www.un.org/en/observances/rural-women-day
❤22🙏7
S
Study Monk KAS 🎯🧘
Photo
Keralam Launches India’s First Ecosystem Red List Assessment.....!!!!! 🗞️ ರಾಷ್ಟ್ರೀಯ ಸುದ್ದಿಗಳು 🌳 ಕೇರಳ ರಾಜ್ಯ ಜೈವಿಕ ವೈವಿಧ್ಯ ಮಂಡಳಿಯು (KSBB) ಭಾರತದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪರಿಸರ ವ್ಯವಸ್ಥೆಗಳ ಕೆಂಪು ಪಟ್ಟಿ ಮೌಲ್ಯಮಾಪನ (Red List Assessment of Ecosystems) ಉಪಕ್ರಮವನ್ನು ಕೈಗೊಂಡಿದ್ದು, ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆಯ ದೃಷ್ಟಿಯಿಂದ ಇದೊಂದು ಮಹತ್ವದ ಮೈಲಿಗಲ್ಲಾಗಿದೆ. 🌳 ಉಪಕ್ರಮದ ಸ್ವರೂಪ: ಇದು ನಿರ್ದಿಷ್ಟ ಪ್ರಾಣಿ ಅಥವಾ ಸಸ್ಯ ಪ್ರಭೇದಗಳನ್ನು ಮಾತ್ರ ಮೌಲ್ಯಮಾಪನ ಮಾಡುವುದರ ಬದಲು, ಇಡೀ ಪರಿಸರ ವ್ಯವಸ್ಥೆಗಳ ಅವನತಿ (Ecosystem Collapse) ಹಾಗೂ ಅಪಾಯದ ಮಟ್ಟವನ್ನು ಅಳೆಯುವ ಮೊದಲ ವೈಜ್ಞಾನಿಕ ಯೋಜನೆಯಾಗಿದೆ. 🌳 ಮಾನದಂಡ: ಇದಕ್ಕಾಗಿ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (IUCN) Red List of Ecosystems ಚೌಕಟ್ಟನ್ನು ಬಳಸಿಕೊಳ್ಳಲಾಗುತ್ತಿದೆ. 🕵️ ಸುದ್ದಿಯ ಮೂಲ:- https://www.gktoday.in/kerala-launches-indias-first-ecosystem-red-list-assessment/
❤20
S
Study Monk KAS 🎯🧘
Photo
Preventive Detention....!!!!! 🗞️ Polity In News 📻 ಮುಖ್ಯ ಚುನಾವಣಾ ಆಯುಕ್ತರು ಹಾಗೂ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಕಾನೂನುಬಾಹಿರ ಬಂಧನಗಳನ್ನು ತಡೆಯಲು ಮತ್ತು ನಾಗರಿಕರ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಈ ಸಂದರ್ಭದಲ್ಲಿ ಚರ್ಚೆಗೆ ಬಂದಿರುವ ‘ಮುನ್ನೆಚ್ಚರಿಕೆ ಬಂಧನ’ (Preventive Detention) ಕುರಿತ ಸಮಗ್ರ ವಿವರಣೆ ಇಲ್ಲಿದೆ. ಮುನ್ನೆಚ್ಚರಿಕೆ ಬಂಧನ (Preventive Detention) ಎಂದರೇನು..? ✅ ವ್ಯಾಖ್ಯಾನ: ಒಬ್ಬ ವ್ಯಕ್ತಿಯು ಈ ಹಿಂದೆ ಮಾಡಿದ ಅಪರಾಧಕ್ಕೆ ಶಿಕ್ಷೆ ನೀಡುವುದರ ಬದಲಾಗಿ, ಆತ ಭವಿಷ್ಯದಲ್ಲಿ ಮಾಡಬಹುದಾದ ಅಪರಾಧವನ್ನು ತಡೆಯಲು ವಿಚಾರಣೆಯಿಲ್ಲದೆ ಬಂಧನದಲ್ಲಿಡುವುದನ್ನು ಮುನ್ನೆಚ್ಚರಿಕೆ ಬಂಧನ ಎನ್ನಲಾಗುತ್ತದೆ. ✅ ಮುಖ್ಯ ಉದ್ದೇಶ: ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಹಾಗೂ ಅಗತ್ಯ ಸೇವೆ/ವಸ್ತುಗಳ ಪೂರೈಕೆಗೆ ಧಕ್ಕೆ ಬಾರದಂತೆ ಕಾಪಾಡುವುದು. ✅ ವ್ಯತ್ಯಾಸ: ಸಾಮಾನ್ಯ ಬಂಧನವು (Punitive Detention) ಅಪರಾಧ ನಡೆದ ನಂತರ ಶಿಕ್ಷಿಸಲು ನಡೆಯುತ್ತದೆ; ಆದರೆ ಮುನ್ನೆಚ್ಚರಿಕೆ ಬಂಧನವು ಸಂಭವನೀಯ ಹಾನಿಯನ್ನು ತಡೆಗಟ್ಟಲು ನಡೆಯುತ್ತದೆ.
❤37
  1. S
    Study Monk KAS 🎯🧘
    Monk View 👁️🕵️ ಸಂವಿಧಾನದ 22ನೇ ವಿಧಿ ಮತ್ತು ಸಂಬಂಧಿತ ನಿಯಮಗಳು ✅ ವಿಧಿ 22(3): ಸಾಮಾನ್ಯ ಬಂಧನದ ವೇಳೆ ಲಭ್ಯವಿರುವ ಮೂಲಭೂತ ಹಕ್ಕುಗಳಾದ—ಬಂಧನಕ್ಕೆ ಕಾರಣ ತಿಳಿಯುವುದು, ವಕೀಲರ ನೆರವು ಪಡೆಯುವುದು ಹಾಗೂ 24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವುದು (ವಿಧಿ 22(1) ಮತ್ತು 22(2)) ಮುನ್ನೆಚ್ಚರಿಕೆ ಬಂಧನಕ್ಕೊಳಗಾದ ವ್ಯಕ್ತಿಗೆ ಅನ್ವಯಿಸುವುದಿಲ್ಲ. ✅ ವಿಧಿ 22(4): ಸಲಹಾ ಮಂಡಳಿಯ (Advisory Board) ಅನುಮೋದನೆಯಿಲ್ಲದೆ ಯಾವುದೇ ವ್ಯಕ್ತಿಯನ್ನು 3 ತಿಂಗಳಿಗಿಂತ ಹೆಚ್ಚು ಕಾಲ ಮುನ್ನೆಚ್ಚರಿಕೆ ಬಂಧನದಲ್ಲಿಡುವಂತಿಲ್ಲ (ಸಂಸತ್ತು ಕಾನೂನಿನ ಮೂಲಕ ಇದಕ್ಕೆ ವಿನಾಯಿತಿ ನೀಡಬಹುದು). ✅ ವಿಧಿ 22(7): ಮುನ್ನೆಚ್ಚರಿಕೆ ಬಂಧನದ ಗರಿಷ್ಠ ಅವಧಿ ಎಷ್ಟು ಇರಬೇಕು, ಸಲಹಾ ಮಂಡಳಿಯ ಕಾರ್ಯವಿಧಾನ ಹೇಗಿರಬೇಕು ಮತ್ತು 3 ತಿಂಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿಡಬಹುದಾದ ಅಸಾಧಾರಣ ಸನ್ನಿವೇಶಗಳು ಯಾವುವು ಎಂಬುದನ್ನು ನಿರ್ಧರಿಸುವ ಅಧಿಕಾರ ಸಂಸತ್ತಿಗೆ ಇದೆ. ಒಮ್ಮೆ ಓದಿ ಅಷ್ಟೇ...!! 🕵️ ಸುದ್ದಿಯ ಮೂಲ:- https://www.thehindu.com/news/national/delhi-protests-against-cec-what-the-law-says-about-preventive-detention-explained/article71574850.ece
    ❤38
Whole thread · 1 reply →
S
Study Monk KAS 🎯🧘
Photo
ಯಕ್ಷಗಾನ (Yakshagana)....!!!!! ✅ ಮೂಲ ಮತ್ತು ಭೌಗೋಳಿಕ ವ್ಯಾಪ್ತಿ: ಇದು ಕರ್ನಾಟಕದ ಕರಾವಳಿ (ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ) ಹಾಗೂ ಮಲೆನಾಡು ಭಾಗಗಳಲ್ಲಿ ಉಗಮಿಸಿ ಬೆಳೆದ ಸಾಂಪ್ರದಾಯಿಕ ಜಾನಪದ ರಂಗಭೂಮಿ ಕಲೆ (Traditional Theatre Form). ✅ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಇದು ಜನಪ್ರಿಯವಾಗಿದೆ. ✅ ಐತಿಹಾಸಿಕ ವಿಕಾಸ: ಇದರ ಬೇರುಗಳು ಭಕ್ತಿ ಚಳವಳಿಯ ಕಾಲಘಟ್ಟದಲ್ಲಿ (ಸುಮಾರು 11ನೇ–16ನೇ ಶತಮಾನ) ಕಂಡುಬರುತ್ತವೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಇದು ವ್ಯವಸ್ಥಿತ ಸಾಹಿತ್ಯಿಕ ಮತ್ತು ರಂಗಭೂಮಿ ರೂಪವನ್ನು ಪಡೆಯಿತು. ಪ್ರಮುಖ ಶೈಲಿಗಳು (Styles) ✅ ಯಕ್ಷಗಾನದಲ್ಲಿ ಪ್ರಮುಖವಾಗಿ ಎರಡು ಪ್ರಾದೇಶಿಕ ಪ್ರಭೇದಗಳಿವೆ. 1️⃣ ಬಡಗುತಿಟ್ಟು (Badaguthittu) 👉 ಪ್ರದೇಶ: ಉತ್ತರ ಕನ್ನಡ, ಉಡುಪಿಯ ಉತ್ತರ ಭಾಗ. 👉 ವೈಶಿಷ್ಟ್ಯ: ಆಕರ್ಷಕ ಹೆಜ್ಜೆಗಾರಿಕೆ, ವೇಗದ ನೃತ್ಯ, ಎತ್ತರವಾದ ಹಾಗೂ ವಿಸ್ತಾರವಾದ ಕಿರೀಟಗಳು, ಭವ್ಯವಾದ ವಸ್ತ್ರವಿನ್ಯಾಸಕ್ಕೆ ಹೆಸರುವಾಸಿ. 2️⃣ ತೆಂಕುತಿಟ್ಟು (Tenkuthittu) 👉 ಪ್ರದೇಶ: ದಕ್ಷಿಣ ಕನ್ನಡ ಹಾಗೂ ಕಾಸರಗೋಡು (ಕೇರಳದ ಗಡಿ ಪ್ರದೇಶ). 👉 ವೈಶಿಷ್ಟ್ಯ: ಕೇರಳದ ಕಥಕ್ಕಳಿ ಪ್ರಭಾವ ಹೊಂದಿದ್ದು, ಅತಿವೇಗದ ಗಿರಕಿಗಳು (Spins), ಚಂಡೆಯ ಅಬ್ಬರದ ನಾದ, ವೃತ್ತಾಕಾರದ ಕಿರೀಟಗಳು ಮತ್ತು ಮುಖವರ್ಣಿಕೆಯ ತೀವ್ರತೆಗೆ ಹೆಸರುವಾಸಿ.
❤37
  1. S
    Study Monk KAS 🎯🧘
    ಭಾರತದ ಅಧಿಕೃತ ಶಾಸ್ತ್ರೀಯ ನೃತ್ಯಗಳು ಮತ್ತು ರಾಜ್ಯಗಳು ✍️ ಭರತನಾಟ್ಯಂ (Bharatanatyam):- ತಮಿಳುನಾಡು (Tamil Nadu) ✍️ ಕಥಕ್ಕಳಿ (Kathakali):- ಕೇರಳ (Kerala) ✍️ ಮೋಹಿನಿಯಟ್ಟಂ (Mohiniyattam):- ಕೇರಳ (Kerala) ✍️ ಕುಚಿಪುಡಿ (Kuchipudi):- ಆಂಧ್ರಪ್ರದೇಶ (Andhra Pradesh) ✍️ ಒಡಿಸ್ಸಿ (Odissi):- ಒಡಿಶಾ (Odisha) ✍️ ಕಥಕ್ (Kathak):- ಉತ್ತರ ಪ್ರದೇಶ (Uttar Pradesh) ✍️ ಸತ್ರಿಯಾ (Sattriya):- ಅಸ್ಸಾಂ (Assam) ✍️ ಮಣಿಪುರಿ (Manipuri):- ಮಣಿಪುರ (Manipur) 🕵️ ಗಮನಿಸಿ: ಸಂಗೀತ ನಾಟಕ ಅಕಾಡೆಮಿಯು ಅಧಿಕೃತವಾಗಿ ಈ 8 ನೃತ್ಯಗಳನ್ನು ಶಾಸ್ತ್ರೀಯ ನೃತ್ಯಗಳೆಂದು ಮಾನ್ಯ ಮಾಡಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ 'ಛೌ' (Chhau) ನೃತ್ಯವನ್ನೂ ಶಾಸ್ತ್ರೀಯ ನೃತ್ಯ ಪಟ್ಟಿಯಲ್ಲಿ ಸೇರಿಸಿ ಒಟ್ಟು 9 ನೃತ್ಯಗಳನ್ನು ಪರಿಗಣಿಸುತ್ತದೆ.
    ❤43
Whole thread · 1 reply →
S
Study Monk KAS 🎯🧘
"ಇಂದು ಪುಸ್ತಕಗಳೊಂದಿಗೆ ಕಳೆಯುವ ಕಷ್ಟದ ರಾತ್ರಿಗಳೇ, ನಾಳೆ ನಿಮ್ಮ ಬದುಕಿಗೆ ಬೆಳಕಾಗುವ ಸುಂದರ ಮುಂಜಾನೆಗಳನ್ನು ನಿರ್ಮಿಸುತ್ತವೆ." Good Night Officer's 😴❤️🙏
❤257🫡37👍10🔥7

An open public feed from the search index ChatCrawler — “Google for public Telegram”; refreshed as the venue is crawled. Times are UTC.

Public content only, official Telegram API. About · FAQ · Index limits · Remove a page · Catalog · Search · How we count